ಕಳೆದ ಸೆಪ್ಟೆಂಬರ್‌ನಲ್ಲಿ 70 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಈ ಯೋಜನೆಗೆ ಸೇರಿಸಲು ಸರ್ಕಾರವು ಯೋಜನೆ ಸೌಲಭ್ಯದ ವಿಸ್ತರಣೆಯನ್ನು ಘೋಷಿಸಿತು. ಇದರ ಅಡಿಯಲ್ಲಿ ಅರ್ಹ ವ್ಯಕ್ತಿಗಳು ತಮ್ಮ ಸಾಮಾಜಿಕ- ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಆಯುಷ್ಮಾನ್ ವಯ ವಂದನ ಕಾರ್ಡ್‌ಗೆ (Ayushman Vaya Vandana Card) ಆನ್‌ಲೈನ್, ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಇಲ್ಲಿದೆ ಮಾಹಿತಿ.
Ayushman Bharat Card: ಆಯುಷ್ಮಾನ್ ಭಾರತ್ ಯೋಜನೆಗೆ ಹೇಗೆ ನೋಂದಾಯಿಸಿಕೊಳ್ಳುವುದು ಮತ್ತು ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಅಗತ್ಯವಾದ ದಾಖಲೆಗಳ ಕುರಿತು ಮಾರ್ಗದರ್ಶಿ...