Friday, 22nd November 2024

Bajaj Pulsar NS160

Bajaj Pulsar NS160 : ಸಿಎನ್‌ಜಿ ಆಯಿತು, ಎಥೆನಾಲ್‌ನಿಂದಲೂ ಓಡುವ ಬೈಕ್‌ ಮಾರುಕಟ್ಟೆಗೆ ಇಳಿಸಲಿದೆ ಬಜಾಜ್‌

Bajaj Pulsar NS160 : ನಿಖರವಾಗಿ ಹೇಳುವುದಾದರೆ, ಇದು ಫ್ಲೆಕ್ಸ್-ಫ್ಯೂಯಲ್ ಮೋಟಾರ್‌ಸೈಕಲ್‌ ಆಗಿರಲಿದೆ.  100 ಪ್ರತಿಶತ ಎಥೆನಾಲ್‌ ಮೂಲಕವೇ ಚಲಿಸುತ್ತದೆ. ಜತೆಗೆ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಲ್ಲೂ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.  ಬಜಾಜ್ ಕಂಪನಿಯು ಈಗಾಗಲೇ ಬ್ರೆಜಿಲ್‌ನಂಥ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.  ಆ ದೇಶಗಳಲ್ಲಿ ಎಥೆನಾಲ್ ಅನ್ನು ಸ್ಥಳೀಯ ಸರ್ಕಾರವು ವ್ಯಾಪಕವಾಗಿ ಬಳಸುತ್ತದೆ . ಆ ಮಟ್ಟಿಗೆ, ಬಜಾಜ್ ಈಗಾಗಲೇ ಬ್ರೆಜಿಲ್‌ನಲ್ಲಿ ಇ 27 ಹೊಂದಿಕೆಯಾಗುವ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಈ ವಾಹನಗಳು ಪೆಟ್ರೋಲ್ ಜತೆಗೆ ಶೇಕಾಡ 27  ಎಥೆನಾಲ್ ಮಿಶ್ರಿತ ಇಂಧನದಲ್ಲಿ ಚಲಿಸುತ್ತದೆ. ಆದಾಗ್ಯೂ ಕಂಪನಿಯು ಇದೇ ಮೊದಲ ಬಾರಿಗೆ ಎಥೆಲಾನ್‌ 100 ಮೋಟಾರ್ ಸೈಕಲ್ ಅನ್ನು ಬಹಿರಂಗಪಡಿಸಿದೆ.

ಮುಂದೆ ಓದಿ