ಸುಕ್ಷೇತ್ರ ಬನಶಂಕರಿ ಜಾತ್ರೆ ನಿಮಿತ್ತ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತಾಧಿಗಳು ವಿಶೇಷ ವರದಿ: ಬಸವರಾಜ್ ಉಳ್ಳಾಗಡ್ಡಿ ಬಾದಾಮಿ: ಕೋವಿಡ್‌ನಿಂದ ರಾಜ್ಯದ ಅನೇಕ ಜಾತ್ರೆೆಗಳು ರದ್ದಾಗಿದ್ದು, ಅಲ್ಲಲ್ಲಿ ಕೆಲವೊಂದು ಜಾತ್ರೆಗಳು ಸಾಂಕೇತಿಕವಾಗಿ ಜರುಗಿವೆ. ಇತ್ತ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿ ಬನಶಂಕರಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಪಡಿಸಿದ್ದರ ನಡುವೆಯೂ, ಭಕ್ತಾದಿಗಳ ಒತ್ತಾಸೆಗೆ ಶಾಸ್ತ್ರೋಕ್ತವಾಗಿ ಸಾವಿರಾರು ಭಕ್ತರ ಮಧ್ಯ ಬನಶಂಕರಿ ದೇವಿ ರಥೋತ್ಸವ ಯಾವುದೇ ವಿಘ್ನಗಳಿಲ್ಲದೇ ಜಯಘೋಷದೊಂದಿಗೆ ಜರುಗಿತು. ರಥಾಂಗ ಪೂಜೆ: ಬನಶಂಕರಿ ದೇವಿ ಗುಡಿಯ ಪೂಜಾರ ಮನೆತನದವರಿಂದ ವಿವಿಧ ಪೂಜಾ […]