ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗುವುದು ಎಂದು ಘೋಷಿಸಿದೆ. ಆರ್‌ಬಿಐ ಎಲ್ಲಾ ಬ್ಯಾಂಕುಗಳು ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳಿಗೆ ಎಟಿಎಂಗಳ ಸಕಾಲಿಕ ಮರು ಪೂರಣವನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದೆ. ಇಲ್ಲದಿದ್ದರೆ ಅವರು ದಂಡವನ್ನು ಎದುರಿಸಬೇಕಾಗುತ್ತದೆ. ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚಿನ ಅವಧಿಯ ಯಾವುದೇ ಎಟಿಎಂನಲ್ಲಿ ಕ್ಯಾಶ್ ಇಲ್ಲ ದಿದ್ದರೆ ಪ್ರತಿ ಎಟಿಎಂಗೆ 10,000 ರೂ.ದಂಡ ವಿಧಿಸಲಾಗುತ್ತದೆ. ಅಕ್ಟೋಬರ್ 1, 2021 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಎಟಿಎಮ್‌ಗಳ […]