ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಸ್ಸಾಂನ ಭಾರತ್ ಜೋಡೋ ನ್ಯಾಯ್ ಯಾತ್ರೆ ಜ.18 ರಂದು ಶಿವಸಾಗರದಿಂದ ಎಂಟು ದಿನ ನಡೆಯಲಿದೆ. ಯಾತ್ರೆಯು ನೆರೆಯ ನಾಗಾಲ್ಯಾಂಡ್‍ನಿಂದ ಅಂತರರಾಜ್ಯ ಗಡಿಯುದ್ದಕ್ಕೂ ಹಲುಯಟಿಂಗ್‍ನಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ. ಯಾತ್ರೆಯು ಅಸ್ಸಾಂನ 17 ಜಿಲ್ಲೆಗಳನ್ನು ಮತ್ತು 833 ಕಿ.ಮೀ ದೂರ ಸಂಚರಿಸಲಿದೆ. ಮೊದಲ ದಿನ ಶಿವಸಾಗರದ ಅಮ್ಗುರಿ ಮತ್ತು ಜೋರ್ಹತ್ ಜಿಲ್ಲೆಯ ಮರಿಯಾನಿಯಲ್ಲಿ ಗಿಬ್ಬನ್ ಅರಣ್ಯ ಪ್ರದೇಶದಲ್ಲಿ ಗಾಂಧಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ದಿನ ಅಮ್ಗುರಿ ಮತ್ತು […]