ಕ್ಯಾಮರೂನ್: ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್‌ಬಾಲ್ ಪಂದ್ಯ ಆಯೋಜಿಸಿದ್ದ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಪಂದ್ಯಾವಳಿಯಲ್ಲಿ ಕೊನೆಯ 16 ನಾಕೌಟ್ ಪಂದ್ಯದಲ್ಲಿ ಆತಿಥೇಯ ದೇಶವು ಕೊಮೊರೊಸ್ ಆಡುವುದನ್ನು ವೀಕ್ಷಿಸಲು ಕ್ಯಾಮರೂನ್ ರಾಜಧಾನಿ ಯೌಂಡೆಯಲ್ಲಿರುವ ಒಲೆಂಬೆ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲು ಪ್ರೇಕ್ಷಕರು ಹೆಣಗಾಡುತ್ತಿರುವಾಗ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದ 6 ಮಂದಿ ಮೃತಪಟ್ಟು, ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರೀಡಾಂಗಣವು 60 ಸಾವಿರ ಜನರು […]