ನವದೆಹಲಿ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿ ಪಡೆದು ಕೊಂಡಿದೆ. ‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರದಲ್ಲಿ ನಡೆದ ನೈಜ ಘಟನೆಗಳನ್ನು ಚಿತ್ರಿಸು ತ್ತದೆ. ಚಿತ್ರವು ಜನಾಂಗೀಯ ನಿಂದನೆಯನ್ನು ತೋರಿಸು ತ್ತದೆ ಮತ್ತು ಲಕ್ಷಗಟ್ಟಲೆ ಕಾಶ್ಮೀರಿ ಹಿಂದೂಗಳು ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ಡೇರೆಗಳಲ್ಲಿ ಹೇಗೆ ವಾಸಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಯಾವುದೇ ಕಡಿತವಿಲ್ಲದೆ ಯುಎಇ ಮತ್ತು ಸಿಂಗಾಪುರದಲ್ಲಿ ಚಿತ್ರವು ಸೆನ್ಸಾರ್ ಕ್ಲಿಯರೆನ್ಸ್ ಪಡೆಯುವ ಬಗ್ಗೆ ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ. […]