ಪುಣೆ: ಪುಣೆಯ ಚಾಂದನಿ ಚೌಕ್ ಪ್ರದೇಶದಲ್ಲಿರುವ ಹಳೆಯ ಸೇತುವೆಯನ್ನು ಸ್ಫೋಟಕ ಬಳಸಿ ಭಾನುವಾರ ಕೆಡವಲಾಗಿದೆ. ಸೇತುವೆಯನ್ನು 90 ರ ದಶಕದ ಆರಂಭದಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿ ಯಲ್ಲಿ (NH4) ನಗರದ ಚಾಂದನಿ ಚೌಕ್ ಪ್ರದೇಶದಲ್ಲಿ ನಿರ್ಮಿಸಲಾಯಿತು. ಚಾಂದಿನಿ ಚೌಕ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಸೇತುವೆಯನ್ನು ನೆಲ ಸಮಗೊಳಿಸಲಾಗಿದೆ. ಜಂಕ್ಷನ್ನಲ್ಲಿ ಬಹು ಹಂತದ ಮೇಲ್ಸೇತುವೆ ನಿರ್ಮಾಣ ವಾಗಲಿದ್ದು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಭಾನುವಾರ ಸ್ಫೋಟ ಬಳಸುವ ಮೂಲಕ ಸೇತುವೆಯನ್ನು ಕೆಡವಲಾಯಿತು ಮತ್ತು ಎಲ್ಲವನ್ನೂ ಯೋಜನೆಯ ಪ್ರಕಾರ ಕಾರ್ಯ ಗತಗೊಳಿಸಲಾಯಿತು. […]