ಬೆಂಗಳೂರು: ರೈಲು ಹಳಿ ಮೇಲೆ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆ ಪೊಲೀಸರು ಕಾಪಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಳಿ ಚನ್ನಸಂದ್ರ ರೈಲು ನಿಲ್ದಾಣ ಬಳಿ ಘಟನೆ ನಡೆದಿದ್ದು ರೈಲು ಹಳಿ ಮೇಲೆ ಮಲಗಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ತಕ್ಷಣವೇ ಹೋಗಿ ಮೇಲಕ್ಕೆತ್ತಿ ತಂದಿದ್ದರಿಂದ ಮೂರು ಜೀವಗಳು ಉಳಿದಿವೆ. ಪತಿಯಿಂದ ಮಾನಸಿಕ ಹಿಂಸೆ, ಕಿರುಕುಳ ತಾಳಲಾರದೆ ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಇಳಿದಿದ್ದಳು ಎನ್ನಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು […]