ರಾಂಚಿ: ಬ್ಲ್ಯಾಕ್ಮೇಲ್ ಆರೋಪದ ಮೇಲೆ ಖಾಸಗಿ ವಾಹಿನಿ ಮುಖ್ಯಸ್ಥ ಅರೂಪ್ ಚಟರ್ಜಿಯನ್ನು ಧನ್ಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಉದ್ಯಮಿ ರಾಕೇಶ್ ಕುಮಾರ್ ಅವರು ಜೂನ್ 27ರಂದು ಅರೂಪ್ ಚಟರ್ಜಿ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಟರ್ಜಿ ಅವರನ್ನು ಬಂಧಿಸಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕುರಿತು ತಿರುಚಿದ ವಿಡಿಯೊ ಪ್ರಸಾರ ಮಾಡಿದ ಆರೋಪದಡಿ ನಿರೂಪಕ ರೋಹಿತ್ ರಂಜನ್ ಅವರನ್ನು ಬಂಧಿಸಿದ ನೊಯ್ಡಾ ಪೊಲೀಸರು, ಬಳಿಕ ಜಾಮೀನಿನ ಮೇಲೆ […]