ಶಿಶಿರ ಕಾಲ ಶಿಶಿರ್ ಹೆಗಡೆ ಸ್ಟೀವ್ ಜಾಬ್ಸ್. ಹೆಸರು ಕೇಳಿಯೇ ಇರುತ್ತೀರಿ! ಆಪಲ್ (ಫೋನ್) ಕಂಪನಿಯ ಸ್ಥಾಪಕರಲ್ಲೊಬ್ಬ, ದಾರ್ಶನಿಕ, ಬಿಸಿನೆಸ್ಮ್ಯಾನ್, ಇತ್ಯಾದಿ. ೨೦೧೦ರ ಆಸುಪಾಸು. ಅದಾಗಲೇ ಐಫೋನ್ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನುಪಡೆದಿತ್ತು. ಆಗತಾನೆ ಬಿಡುಗಡೆಯಾದ ಐಪ್ಯಾಡ್ ಮಕ್ಕಳ ಶಿಕ್ಷಣಕ್ಕೆ ಹೇಳಿಮಾಡಿಸಿದ್ದು ಎಂದು ಆಪಲ್ ಕಂಪನಿ ಜಾಹೀ ರಾತು ನೀಡುತ್ತಿತ್ತು. ಆಪಲ್ ಕಂಪನಿಯ ಮಾರ್ಕೆಟಿಂಗ್ ತಂಡವು ಅಮೆರಿಕದ ಹಲವು ರಾಜ್ಯ ಸರಕಾರಗಳ ಜತೆ ವ್ಯಾವಹಾರಿಕವಾಗಿ ಕೈಜೋಡಿಸಿತ್ತು. ಶಿಕ್ಷಣಕ್ಕೆ ಬೇಕಾಗುವ ಅಪ್ಲಿಕೇಷನ್ಗಳನ್ನು ಐಪ್ಯಾಡ್ಗೆಂದೇ ಅಭಿವೃದ್ಧಿ ಪಡಿಸಲಾಯಿತು. ಕ್ರಮೇಣ ಅಮೆರಿಕನ್ ಶಿಕ್ಷಣ […]