ನವದೆಹಲಿ: ಆಸ್ಪತ್ರೆಗಳಲ್ಲಿ ದಾದಿಯರು ಮಲಯಾಳಂ ಮಾತನಾಡಬಾರದು. ಹಿಂದಿ ಅಥವಾ ಇಂಗ್ಲಿಷ್ನಲ್ಲೇ ಮಾತನಾಡಬೇಕು ಎಂದು ಸೂಚನೆ ನೀಡಿದ್ದ ದೆಹಲಿ ಸರ್ಕಾರದ ಅಧೀನದ ಜಿ.ಬಿ.ಪಂತ್ ಆಸ್ಪತ್ರೆ ನಡೆ ತೀವ್ರ ಆಕ್ರೋಶಕ್ಕೆ ಗುರಿಯಾಗಿ, ಅಂತಿಮವಾಗಿ ಸುತ್ತೋಲೆಯನ್ನು ರದ್ದು ಮಾಡಿದೆ. ‘ನಮ್ಮ ಗಮನಕ್ಕೆ ಬಾರದಂತೆ ಈ ಸುತ್ತೋಲೆ ಹೊರಡಿಸಲಾಗಿದೆ,’ ಎಂದು ಗೋವಿಂದ್ ವಲ್ಲಭ ಪಂತ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋ ಧನಾ (ಜಿಐಪಿಎಂಇಆರ್) ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಲಯಾಳಂ ಭಾಷಿಕ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಆರೋಗ್ಯ […]