ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ ತಿಳಿದಿರಲಿಲ್ಲ. ಜೀವಿಗಳು ಮನುಷ್ಯನ ಶರೀರದ ಮೇಲೆ ವಾಸಿಸುತ್ತವೆ. ಅವನ ಒಡಲಿನಲ್ಲಿ ಆಶ್ರಯ-ಆಹಾರ ಪಡೆದು ಅಲ್ಲಿಯೇ ತಮ್ಮ ಸಂಸಾರ ವರ್ಧಿಸುತ್ತಾ, ಕಾಯಿಲೆಗಳನ್ನು ಉಂಟುಮಾಡುತ್ತವೆ ಎಂಬ ವಿಚಾರ ಮೊದಲ ಬಾರಿಗೆ ತುರಿಕಜ್ಜಿಯ ಕಾಯಿಲೆಯ ಅಧ್ಯಯನದಲ್ಲಿ ಕಂಡುಬಂದಿತು. ಸೂಜಿಮೊನೆ ಗಾತ್ರದ ನುಸಿಯೊಂದು ಕಜ್ಜಿಗೆ ಕಾರಣ ಎನ್ನುವ ವಿಚಾರ ತಿಳಿದಾಗ ಮನುಕುಲ ಬೆರಗಾಯಿತು. ಇದರೊಡನೆ, […]