ನವದೆಹಲಿ: 2022 ರ ಬರ್ಮಿಂಗ್ ಹ್ಯಾಮ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ಚಂಡೀಗಢದಲ್ಲಿ ನಡೆಯಬೇಕಿದ್ದ ಕಾಮನ್ವೆಲ್ತ್ ಬಿಲ್ಲುಗಾರಿಕೆ ಮತ್ತು ಶೂಟಿಂಗ್ ಚಾಂಪಿಯನ್ ಶಿಪ್ಗಳನ್ನು ರದ್ದುಪಡಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತಂತೆ ಕಾಮನ್ವೆಲ್ತ್ ಗೇಮ್ಸ್ ಇಂಡಿಯಾ (ಸಿಜಿಐ) ಕಾರ್ಯನಿರ್ವಾಹಕ ಮಂಡಳಿಯು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಬೆಂಬಲದೊಂದಿಗೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಸಿಜಿಎಫ್ ಅಧ್ಯಕ್ಷ ಡೇಮ್ ಲೂಯಿಸ್ ಮಾರ್ಟಿನ್ ಡಿಬಿಇ ಅವರು, ಇದು ಪ್ರಸ್ತುತ ಹವಾಮಾನದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರವಾಗಿದೆ. ಚಂಡೀಗಢ 2022 […]