ನವದೆಹಲಿ; ಸಿಖ್ ವಿರೋಧಿ ದಂಗೆಯ ಪುಲ್ ಬಂಗಾಶ್ ಪ್ರದೇಶದಲ್ಲಿ ನಡೆದ ಹತ್ಯೆಗಳ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಷರತ್ತು ವಿಧಿಸಿ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜಾಮೀನು ಮಂಜೂರು ಮಾಡಿದ್ದು, ಸಾಕ್ಷ್ಯಾ ಧಾರಗಳನ್ನು ಹಾಳು ಮಾಡದಂತೆ ಅಥವಾ ಕೋರ್ಟ್ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಸೂಚಿಸಿದೆ. ನ್ಯಾಯಾಲಯದ ನಿರೀಕ್ಷಣಾ ಜಾಮೀನಿನ ಕಾರಣದಿಂದಾಗಿ ಟೈಟ್ಲರ್ ಅವರನ್ನು ಬಂಧಿಸಲು ಸಾಧ್ಯವಿಲ್ಲ. 1 ಲಕ್ಷ ಜಾಮೀನು ಬಾಂಡ್ […]