ಅಭಿಮತ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಸರಕಾರಗಳು ಆರ್ಥಿಕ ಉಳಿಕೆ ಮತ್ತು ಸಂಪನ್ಮೂಲ ಕ್ರೋೋಢೀಕರಣದ ದೃಷ್ಟಿಯಿಂದ ಬಹುತೇಕ ಇಲಾಖೆಯ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಪ್ರಸ್ತುತ ಗುತ್ತಿಗೆ ಆಧಾರದಲ್ಲೇ ನೇಮಕ ಮಾಡಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾ ಬರುತ್ತಿದೆ. ಜತೆಗೆ ಕೆಲ ಇಲಾಖೆಗಳನ್ನು ಖಾಸಗೀಕರಣಗೊಳಿಸುತ್ತಲೂ ಬರುತ್ತಿದೆ. ಇಂಧನ ಇಲಾಖೆಯ ನಾಲ್ಕು ವಲಯದ ಪೈಕಿ ಮೂರು ವಲಯಗಳನ್ನು ಖಾಸಗಿಗೊಳಿಸಲು ಸಿದ್ಧತೆಗಳು ನಡೆಯುತ್ತಿದೆ. ಇವುಗಳ ಮಧ್ಯೆೆ ಕರೋನಾ ಸಂಕಷ್ಟದಿಂದಲೂ ಎಲ್ಲಾ ವಲಯಕ್ಕೂ ಬಹುದೊಡ್ಡ ಆರ್ಥಿಕ ಹೊಡೆತ ಬಿದ್ದಿರುವುದಂತೂ ಸುಳ್ಳಲ್ಲ. ಸರಕಾರದ ಹಲವಾರು ಇಲಾಖೆಗಳಲ್ಲಿ ಜೀವನ ಭದ್ರತೆಯಿಲ್ಲದೆ […]