ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ರಾಷ್ಟ್ರೀಯ ವಿಚಾರಧಾರೆಯನ್ನು ಎತ್ತಿ ಹಿಡಿಯುವ ಪತ್ರಿಕೆಗಳು ದಕ್ಷಿಣ ಭಾರತದಲ್ಲಿ ಇಲ್ಲ. ಎಸ್.ಸದಾನಂದ ಸಂಪಾದಕತ್ವದ ‘ದಿ ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆ ಕುಂಟುತ್ತಾ ಸಾಗುತ್ತಿದೆ. ಆ ಪತ್ರಿಕೆಯನ್ನು ನೀವೇಕೆ ಖರೀದಿಸ ಬಾರದು” ಎಂದು ಮಹಾತ್ಮ ಗಾಂಧಿಯವರು ರಾಮನಾಥ ಗೊಯೆಂಕಾ ಅವರಿಗೆ ಹೇಳಿದಾಗ, ಗೊಯೆಂಕಾ ಸಮ್ಮತಿಸಿ ದರು. ಹಾಗೆ ನೋಡಿದರೆ, ಗೊಯೆಂಕಾಗೆ ಪತ್ರಿಕೆ ವ್ಯವಹಾರ ಹೊಸತು. “ಮಾರವಾಡಿಯಾದವನು ಕಾಗದ ವ್ಯಾಪಾರ ಮಾಡಬಹುದೇ ಹೊರತು, ಪತ್ರಿಕೆ ವ್ಯವಹಾರವನ್ನಲ್ಲ” ಎಂಬುದು ಗೊಯೆಂಕಾ ಅವರ ಮೊದಲ ಪ್ರತಿಕ್ರಿಯೆಆಗಿತ್ತಂತೆ. ಆದರೆ […]