ಸರ್ಕಾರಿ ನೌಕರರಿಗೆ ಪ್ರಸ್ತುತ ಶೇ. 42 ರಷ್ಟು ತುಟ್ಟಿಭತ್ಯೆಯನ್ನು (DA Hike) ನೀಡಲಾಗುತ್ತಿದ್ದು, ಇದನ್ನು ಶೇ. 3ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸರ್ಕಾರ ನಿರ್ಧರಿಸಿದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಶೇ. 45ಕ್ಕೆ ಏರಲಿದೆ. ಈ ಹೊಸ ದರವು 2024ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಯಾಗಲಿದೆ.