ಧರ್ಮಪುರ: ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ. ಕೆರೆಯಲ್ಲಿ 42 ವರ್ಷಗಳ ಕಾಲ ನೀರು ಇಲ್ಲದೇ ಇದ್ದುದರಿಂದ ಯಥೇಚ್ಛವಾಗಿ ಬಳ್ಳಾರಿ ಜಾಲಿ ಬೆಳೆದಿತ್ತು. ಎರಡು ವರ್ಷಗಳ ಹಿಂದೆ ಉತ್ತಮ ಮಳೆ ಯಾಗಿದ್ದರಿಂದ ಕೆರೆ ತುಂಬ ನೀರು ಸಂಗ್ರಹವಾಗಿತ್ತು. ಆದರೆ ಇದೀಗ ನೀರು ಮಲಿನಗೊಂಡು ಸಮಸ್ಯೆ ತಂದೊಡ್ಡಿದೆ. ಇಂಗುವಿಕೆ ಹಾಗೂ ಬಿಸಿಲಿನ ತಾಪಕ್ಕೆ ಆವಿಯಾಗಿರುವ ಕಾರಣ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಜತೆಗೆ ಬಳ್ಳಾರಿ […]