ಇಂದೋರ್: ಮಧ್ಯಪ್ರದೇಶ ರಾಜ್ಯದ ಇಂದೋರ್’ನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಮೇಲೆ ವಾರ್ಡ್ ಬಾಯ್ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಜುಲೈ 28ರಂದು ಮಹಾರಾಜ ಯಶ್ವಂತ್‌ರಾವ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಕಳೆದ ಸೋಮವಾರ ರಾತ್ರಿ ಪರಾರಿಯಾಗಿರುವ 32 ವರ್ಷದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನೆರೆಯ ಧಾರ್ ಜಿಲ್ಲೆಯ ನಿವಾಸಿ ಮಹಿಳೆಯು ಜುಲೈ 28ರಂದು ಎಂವೈಎಚ್ ಆಸ್ಪತ್ರೆಗೆ ಡಾಯಲಿಸಿಸ್‌ಗೆಂದು ಬಂದಿದ್ದರು. ಈ ವೇಳೆ ವಾರ್ಡ್ ಬಾಯ್ ಬಟ್ಟೆ ಬದಲಾಯಿಸಲೆಂದು ಆಕೆಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು […]