Friday, 22nd November 2024

ಚಿತೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಅಭಿಮಾನಿಗಳ ಅತಿರೇಕ

ರಾಜ್ ಅವರೇ ನಮಸ್ಕರಿಸಿದ್ದ ವೈದ್ಯರ ಹೆಸರಿಗೆ ಮಸಿ ಬಳಿವ ಯತ್ನ ಹೃದಯವಂತನ ಸಾವನ್ನು ಅವಮಾನಿಸುವ ಹೃದಯಹೀನರ ವಿಕೃತಿ ವಿಶೇಷ ವರದಿ: ರಾಧಾಕೃಷ್ಣ ಭಡ್ತಿ ಬೆಂಗಳೂರು ನಿಜಕ್ಕೂ ನಾಚಿಕೆ ಆಗಬೇಕು! ಪುನೀತ್ ರಾಜ್‌ಕುಮಾರ್ ಸಾವಿನ ಸನ್ನಿವೇಶದಲ್ಲಿ ತಥಾಕಥಿತ ಅಭಿಮಾನಿಗಳು ವೈದ್ಯರಿಗೇ ಜೀವಬೆದರಿಕೆಯೊಡ್ಡುವ, ಅವರ ವಿರುದ್ಧವೇ ದೂರು ದಾಖಲಿಸುವ ಅತಿರೇಕದ ವರ್ತನೆ ತೋರುತ್ತಿರುವುದು ನಿಜಕ್ಕೂ ತಲೆ ತಗ್ಗಿಸುವ ವಿಚಾರ. ಆ ಮೂಲಕ ಸಜ್ಜನಿಕೆಯ ಸಾಕಾರವಾಗಿದ್ದ ನಟನಿಗೆ ಮಾತ್ರವಲ್ಲ, ಪುನೀತ್‌ರೊಳಗಿದ್ದ ‘ಹೃದಯವಂತ’ ಮನುಷ್ಯ, ಮಾದರಿ ನಾಗರಿಕನ ಆದರ್ಶವನ್ನು ಮಣ್ಣು ಮಾಡಲಾಗುತ್ತಿದೆ. ಇದರಿಂದ ಅಪ್ಪು […]

ಮುಂದೆ ಓದಿ