ತಿರುವನಂತಪುರಂ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸದ ವೇಳೆ ಮಹಿಳಾ ವೈದ್ಯೆ ಯೊಬ್ಬರಿಗೆ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಹೆಚ್ಚುತ್ತಿರುವ ನಡುವೆಯೇ ಕೇರಳ ಸರ್ಕಾರ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಕಾನೂನು ಜಾರಿಗೆ ತರಲು ನಿರ್ಧರಿಸಿದೆ. ಆರೋಗ್ಯ ವಲಯದ ಎಲ್ಲ ಉದ್ಯೋಗಿಗಳ ರಕ್ಷಣೆಗಾಗಿ ‘ಆಸ್ಪತ್ರೆ ಸಂರಕ್ಷಣಾ ಕಾಯ್ದೆ’ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ನಿರ್ಧರಿಸಿದೆ. ನೌಕರರಿಗೆ ರಕ್ಷಣೆ, 6 ತಿಂಗಳಿಂದ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ನಿಬಂಧನೆಗಳು ತಿದ್ದುಪಡಿಯಲ್ಲಿ ಸೇರಿವೆ. ಈ ಕಾಯಿದೆಯು ಆರೋಗ್ಯ ವಲಯದ ನೌಕರರು ಸೇರಿದಂತೆ ಎಲ್ಲ […]