ಮುಂಬೈ: 20-20 ಪಂದ್ಯಗಳು 2020ನೇ ವರ್ಷದಲ್ಲಿ ನಡೆಯುವುದೂ ಅನುಮಾನವಾಗಿತ್ತು. ಆದರೀಗ ಹದಿಮೂರನೇ ಐಪಿಎಲ್ ಕರೋನಾ ಆತಂಕದ ನಡುವೆ ಯಾವ ಅಡ್ಡಿಯಿಲ್ಲದೆ ನಡೆದಿದೆ. ಪ್ರತಿಬಾರಿಯ ಐಪಿಎಲ್ಗಿಂತ ಈ ಬಾರಿಯದ್ದು ವಿಶೇಷ ಟೂರ್ನಿ ಎಂದರೆ ತಪ್ಪಾಗದು. ಅಂತಹ ಕೆಲ ವಿಶೇಷಗಳೇನು ಎಂಬ ಪರಿಚಯವಿದು. ಅಭಿಮಾನಿಗಳೇ ಇಲ್ಲದೇ ಆಟ: ಐಪಿಎಲ್ ಎಂದರೆ ತಕ್ಷಣ ನೆನಪಾಗುವುದು ಕಿಕ್ಕಿರಿದು ತುಂಬಿದ ಸ್ಟೇಡಿಯಂಗಳು. ಭಿನ್ನ-ವಿಭಿನ್ನ ವೇಷಭೂಷಣ ತೊಟ್ಟು ಬಂದು ತಮ್ಮ ನೆಚ್ಚಿನ ತಂಡಕ್ಕೆ ಪ್ರೋತ್ಸಾಹ ನೀಡುವ ಫ್ಯಾನ್ಸ್ಗಳು. ಆದರೆ ಈ ಬಾರಿ ಕರೋನ ದಿಂದಾಗಿ ಐಪಿಎಲ್ ನಡೆಯುವುದೇ […]