ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ. 2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು. ವೆಬ್ ಸೈಟ್ ಅಥವ ಪೋನ್ ಮೂಲಕ ಪ್ರಯಾಣಿ ಕರು ಆಹಾರವನ್ನು ಆರ್ಡರ್ ಮಾಡಿ ಪಡೆಯಬಹುದಾಗಿತ್ತು. ಆದರೆ, ಕೋವಿಡ್ ಸಮಯದಲ್ಲಿ ಭಾರತೀಯ ರೈಲ್ವೆ ಸ್ಥಗಿತಗೊಳಿಸಿತ್ತು. ಸುಮಾರು 1 ವರ್ಷದ ಬಳಿಕ ಈ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ. ಫುಡ್ ಆನ್ ಟ್ರಾಕ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಆಹಾರಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ. ದೆಹಲಿ, ಲಕ್ನೋ, […]