Sunday, 15th December 2024

ಹವಾಯಿಯಲ್ಲಿ 5.7 ತೀವ್ರತೆಯ ಭೂಕಂಪನ

ಅಮೆರಿಕ: ಹವಾಯಿಯಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಯುಎಸ್ ಭೂಕಂಪಶಾಸ್ತ್ರಜ್ಞರು ಪ್ರಬಲ ಭೂಕಂಪ ಸಂಭವಿಸಿದೆ. ಆದರೆ ಸುನಾಮಿ ಬೆದರಿಕೆ ಇಲ್ಲ ಎಂದು ಹೇಳಿದರು. ಹವಾಯಿಯ ಮುಖ್ಯ ದ್ವೀಪದ ಪಹ್ಲಾ ಬಳಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಭೂಮಿಯ ಮೇಲ್ಮೈಯಿಂದ ಸುಮಾರು 37 ಕಿಲೋಮೀಟರ್ (23 ಮೈಲಿ) ಕೆಳಗೆ ಇದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಮುಖ್ಯ ದ್ವೀಪದಾದ್ಯಂತ ಭೂಕಂಪನದ ಅನುಭವವಾಗಿದೆ ಎಂದು ಯುಎಸ್ಜಿಎಸ್ ಅನ್ನು ಉಲ್ಲೇಖಿಸಿ ವೆಬ್ಸೈಟ್ ವರದಿ ಮಾಡಿದೆ.

ಮುಂದೆ ಓದಿ