ಮಹಾರಾಷ್ಟ್ರದ ಔರಂಗಾಬಾದ್ನ ನಮಿತಾ ಕಪಾಲೆ ಮತ್ತು ಕಲ್ಯಾಣಿ ಭರಾಂಬೆ ಅವರು ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ಸ್ನೇಹಿ ಮನೆಯನ್ನು (Eco Friendly Home) ನಿರ್ಮಿಸಿದ್ದು, ಇದಕ್ಕಾಗಿ ಅವರು ಸರಿಸುಮಾರು 12- 13 ಟನ್ ಗಳಷ್ಟು ಮಣ್ಣು ಬಳಕೆ ಮಾಡಿದ್ದಾರೆ. ಅಸ್ಸಾಂನ ಶಾಲೆಯೊಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಆಸನಗಳನ್ನು ನೋಡಿ ಇವರಿಬ್ಬರು ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ.