ಬೆಂಗಳೂರು: ವಿವಿಧ ಕನ್ನಡ ಪರ ಸಂಘಟನೆಗಳು ಸೆ.29ರಂದು ನೀಡಿದ ಎರಡನೇ ಬಂದ್ ಕರೆಯಿಂದಾಗಿ ನಗರದ ಕೆಲವು ಖಾಸಗಿ ಶಾಲೆಗಳಿಗೆ ಗುರುವಾರದ ಈದ್-ಮಿಲಾದ್ ರಜೆ ರದ್ದುಗೊಳಿಸಿವೆ. ಬಂದ್‌ನಿಂದಾಗಿ ಕಳೆದು ಹೋದ ಶೈಕ್ಷಣಿಕ ದಿನಗಳನ್ನು ಮರಳಿ ಪಡೆಯಲು, ಕೆಲವು ಶಾಲೆಗಳು ಶನಿವಾರದ ತರಗತಿಗಳನ್ನು ನಿಗದಿ ಪಡಿಸಿವೆ. ಖಾಸಗಿ ಅನುದಾನರಹಿತ ಶಾಲೆಯೊಂದರ ಪ್ರಾಂಶುಪಾಲರು, “ಮಧ್ಯಾವಧಿ ಪರೀಕ್ಷೆ ನಡೆಯುತ್ತಿರುವುದರಿಂದ ಗುರುವಾರ ಮತ್ತು ಶನಿವಾರ ತರಗತಿಗಳನ್ನು ನಡೆಸದೆ ನಮಗೆ ಬೇರೆ ದಾರಿಯಿಲ್ಲ” ಎಂದು ಹೇಳಿದರು. “ಶುಕ್ರವಾರ ಕರ್ನಾಟಕ ಬಂದ್ ಆಗಿರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. […]