ಬೆಂಗಳೂರು: ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಎಸ್ಕಾಂಗಳಿಂದ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗ ಒಪ್ಪಿದರೆ ಏಪ್ರಿಲ್ 1ರಿಂದ ದರ ಹೆಚ್ಚಳ ಆಗಲಿದೆ. ಬೆಸ್ಕಾಂ ಸೇರಿದಂತೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ. ಡಿಸೆಂಬರ್ ಕೊನೆಯ ವಾರ ಬೆಸ್ಕಾಂನಿಂದ ಯುನಿಟ್ ಗೆ 49 ಪೈಸೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, […]