ನವದೆಹಲಿ: ದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿರುವುದಾಗಿ ಅಫ್ಘಾನಿಸ್ತಾನ ಪ್ರಕಟಣೆ ಹೊರಡಿಸಿದೆ. ಭಾರತ ಸರ್ಕಾರದ ನಿರಂತರ ಸವಾಲುಗಳಿಂದಾಗಿ ನ.23, 2023ರಿಂದ ಜಾರಿಗೆ ಬರುವಂತೆ ಕಚೇರಿಯನ್ನು ಮುಚ್ಚಲು ನಿರ್ಧರಿಸ ಲಾಗಿದೆ. ಈ ನಿರ್ಧಾರವನ್ನು ಅಫ್ಘಾನಿಸ್ತಾನದ ರಾಯಭಾರ ಕಚೇರಿಯ ಕಡೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಫ್ಘಾನ್ ರಾಯಭಾರ ಕಚೇರಿಯು ತನ್ನ ಹೇಳಿಕೆಯಲ್ಲಿ, ಭಾರತದಲ್ಲಿನ ಆಫ್ಘನ್ ಪ್ರಜೆಗಳಿಗೆ, ಆಫ್ಘನ್ ಮಿಷನ್ಗೆ ನೀಡಿರುವ ಬೆಂಬಲಕ್ಕಾಗಿ ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಮತ್ತು ಕಾಬೂಲ್ ನಲ್ಲಿ ಕಾನೂನುಬದ್ಧ ಸರ್ಕಾರದ ಅನುಪಸ್ಥಿತಿಯಲ್ಲಿ […]