ಮುಂಬೈ : ಏಳು ಜನರನ್ನು ಬಂಧಿಸಿ ಅವರಿಂದ 7 ಕೋಟಿ ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆಯಲ್ಲಿ ತೊಡಗಿರುವ ಅಂತರರಾಜ್ಯ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಮುಂಬೈ ಅಪರಾಧ ವಿಭಾಗ ಘಟಕದ ಪೊಲೀಸರು ಕಾರ್ಯಾಚರಣೆಗೆ ಮುಂದಾ ಗಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್ ಆದ ಪೊಲೀಸರು ಜನವರಿ 25 ರಂದು ದಹಿಸರ್ ಉಪನಗರದ ಚೆಕ್ ಪೋಸ್ಟ್‌ನಲ್ಲಿ ಅನುಮಾನಸ್ಪದ ಕಾರನ್ನು ತಡೆದು ವಿಚಾರಿಸಿದಾಗ ಕಳ್ಳರು ಎಂದು ಖಚಿತ ವಾಗಿದೆ. […]