ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪರೀಕ್ಷೆಗೊಳಪಡಿಸಿದ ಒಟ್ಟು 84,874 ಔಷಧಗಳ ಮಾದರಿಗಳ ಪೈಕಿ 7,700 ಮಾದರಿಗಳನ್ನು ಕಳಪೆ ಗುಣಮಟ್ಟದವು ಮತ್ತು 670 ಮಾದರಿಗಳನ್ನು ಕಲಬೆರಕೆ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2020-21ರಲ್ಲಿ 2,652 ಔಷಧ ಮಾದರಿಗಳು ಕಳಪೆ ಗುಣಮಟ್ಟ ದವು ಹಾಗೂ 263 ಮಾದರಿಗಳು ಕಲಬೆರಕೆ ಎಂದು ಘೋಷಿಸಲಾಗಿತ್ತು. ನಕಲಿ ಮತ್ತು ಕಲಬೆರಕೆ ಎಂದು ಗುರುತಿಸಲಾದ ಔಷಧ ಮಾದರಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ 2020-21ರಲ್ಲಿ 164 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ಮೂರು […]