Saturday, 23rd November 2024

14ನೇ ದಿನಕ್ಕೆ ಕಾಲಿಟ್ಟ ’ದೆಹಲಿ ಚಲೋ’: ಇನ್ನೋರ್ವ ರೈತನ ಸಾವು

ನವದೆಹಲಿ: ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಬುಧವಾರ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಗಿದೆ. ರಾಜಧಾನಿಯಲ್ಲಿ ಚಳಿಯೂ ಹೆಚ್ಚಾಗಿರುವುದರಿಂದಾಗಿ 32 ವರ್ಷದ ರೈತನೊಬ್ಬ ಕೊನೆಯುಸಿರೆಳೆದಿದ್ದಾನೆ. ಹರಿಯಾಣ ಮೂಲದ ಅಜಯ್​ ಮೋರ್​ ಮೃತ ದುರ್ದೈವಿ. ಕಳೆದ 10 ದಿನಗಳಿಂದ ಹೋರಾಟದಲ್ಲಿ ಭಾಗವಹಿಸಿದ್ದ. ಚಳಿ ಹೆಚ್ಚಿದ್ದರಿಂದ ಅದನ್ನು ತಾಳಲಾರದೆ ಮಂಗಳವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಜಯ್​ಗೆ ವಯಸ್ಸಾದ ತಂದೆ ತಾಯಿಯಿದ್ದಾರೆ. ಮೂರು ಮಕ್ಕಳಿರುವುದಾಗಿ ವರದಿ ಮಾಡಿದೆ. ರೈತ ಹೋರಾಟ ಆರಂಭವಾದ 14 ದಿನಗಳಲ್ಲಿ ಐವರು ರೈತರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.

ಮುಂದೆ ಓದಿ

ಡೆಲ್ಲಿ ಚಲೋ: 6ನೇ ಸುತ್ತಿನ ಮಾತುಕತೆ ರದ್ದು, 14ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ನವದೆಹಲಿ: ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿದೆ. ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ...

ಮುಂದೆ ಓದಿ