ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಜಿ-೨೦ ಶೃಂಗಸಭೆಯು ಮುಕ್ತಾಯಗೊಂಡಿದೆ. ವಿವಿಧ ರಾಷ್ಟ್ರ ನಾಯಕರು ಸಭೆಯಲ್ಲಿನ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆಗೆ ಉತ್ತೇಜನ ನೀಡುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುವುದು ಇವುಗಳಲ್ಲಿ ಮುಖ್ಯವಾದುದು. ಸಮುದ್ರ ಆರ್ಥಿಕತೆಯಲ್ಲಿ ನವೀನ ಆವಿಷ್ಕಾರಗಳು, ಆಹಾರ ಭದ್ರತೆ ಕುರಿತಾದ ಘೋಷಣೆಗಳು ಅನುಮೋದನೆಗೊಂಡಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ ವೇಗವನ್ನು ಹೆಚ್ಚುಗೊಳಿಸುವುದು ಎಂದಿನಿಂದಲೂ […]