ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ಮಂಗಳವಾರ ನಡೆಯುತ್ತಿದೆ. ಆದರೆ ಸೋಮವಾರ ರಾತ್ರಿ ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ನಾಲ್ಕು ಇವಿಎಂ ಮತಯಂತ್ರಗಳು ಹಾಗೂ ನಾಲ್ಕು ವಿವಿಪ್ಯಾಟ್ ಗಳು ಪತ್ತೆಯಾಗಿವೆ. ಉಲುಬೆರಿಯಾ ಉತ್ತರ ಕ್ಷೇತ್ರದಲ್ಲಿನ ಟಿಎಂಸಿ ಮುಖಂಡನ ನಿವಾಸದಲ್ಲಿ ಈ ಯಂತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ತುಳಸಿಬೆರಿಯಾದಲ್ಲಿನ ಟಿಎಂಸಿ ಮುಖಂಡ ಗೌತಮ್ ಘೋಷ್ ಅವರ ನಿವಾಸ ದಿಂದ ಈ ಇವಿಎಂ ಯಂತ್ರಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯ ಚಿರಾನ್ ಬೇರಾ ಆರೋಪಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋ ಜನೆಗೊಂಡಿದ್ದ […]