ನಿಜಾಮಾಬಾದ್: ಜಿಲ್ಲೆಯ ಮೆಂಡೋರಾ ಮಂಡಲದ ಶ್ರೀರಾಮಸಾಗರ್ ಪ್ರಾಜಕ್ಟ್ -ಎಸ್‌ಆರ್‌ಎಸ್‌ಪಿಯ ವಿಐಪಿ ಘಾಟ್‌ನಲ್ಲಿ ಶುಕ್ರವಾರ ದೋಣಿ ಮುಳುಗಿ ಆರು ಮಂದಿ ಗೋದಾವರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪರಿಣಿತ ಈಜುಗಾರರು ಐದು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆದಿದೆ. ಮೃತರು ನಿಜಾಮಾಬಾದ್ ಜಿಲ್ಲೆಯ ದಿಕಂಪಲ್ಲಿ ಹಾಗೂ ಗುತ್ಪಾ ಗ್ರಾಮಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ. ಗುತ್ಪಾ ಗ್ರಾಮದ ಕುಟುಂಬ ಮತ್ತು ಅವರ ಸಂಬಂಧಿಕರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಸಂಬಂಧಿಕರಾಗಿದ್ದರು ಎಂದು ತಿಳಿದು ಬಂದಿದೆ.