ಹಂಪಿ ಏಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ನಮ್ಮ ದೇಶದ ದುರಾದೃಷ್ಟವೆಂದರೆ ಸಂವಿಧಾನ, ಕಾಯಿದೆ, ಕಾನೂನುಗಳು ಪ್ರಜೆಗಳಿಗಾಗಿಯೇ ರಚಿತವಾಗುತ್ತದೆ. ಆದರೆ ಅದು ಶ್ರೀಸಾಮಾನ್ಯನಿಗೆ ತಲುಪುವುದೇ ಇಲ್ಲ. ರಾಮಾಯಣ – ಮಹಾಭಾರತ – ಭಗವದ್ಗೀತೆಯನ್ನು ಆರಾಧಿಸುತ್ತೇವೆ, ಪೂಜಿಸುತ್ತೇವೆ. ಆದರೆ ಪಾಲಿಸುವುದಿಲ್ಲ. ಸಂವಿಧಾನವೇ ಪ್ರಜಾಪ್ರಭುತ್ವದ ಗ್ರಂಥವೆಂದು ಹೆಮ್ಮೆ ಪಡುತ್ತೇವೆ. ಆದರೆ ಅದರಲ್ಲಿನ ನೀತಿ ನಿಯಮ ಗಳನ್ನು ನಮ್ಮ ರಾಜಕಾರಣಿಗಳು ಪ್ರಜೆಗಳಿಗೆ ತಿಳಿಸುವ ಪ್ರಯತ್ನವೇ ಮಾಡುವುದಿಲ್ಲ. ಅಸಲಿಗೆ ಅವರಿಗೆ ಅದರ ಮೊದಲ ಪುಟ ದಲ್ಲೇನಿದೆ ಎಂಬುದೇ ಗೊತ್ತಿರುವುದಿಲ್ಲ. ಹಾಗೆಯೇ ಸರಕಾರಗಳು ಕಾಯಿದೆಗಳನ್ನು ತಂದಾಗ […]