ಶಾಲೆಯೆಂದರೆ ದೇಗುಲವಿದ್ದ ಹಾಗೆ. ಅದು ಒಬ್ಬ ವ್ಯಕ್ತಿಯ (Viral News) ಜೀವನವನ್ನೇ ಬದಲಾಯಿಸಿಬಿಡುವಂತಹ ಸ್ಥಳವದು. ಜ್ಞಾನದೇಗುದಂತಿರುವ ಈ ಸ್ಥಳದಲ್ಲಿ ವಿದ್ಯಾರ್ಥಿನಿಯರು ಸಹಪಾಠಿಯ ಹುಟ್ಟುಹಬ್ಬದ ನೆಪವೊಡ್ಡಿ ಗುಂಡಿನ ಪಾರ್ಟಿ ಮಾಡಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಈ ಕೃತ್ಯವೆಸಗಿದ್ದಾರೆ. ಈ ವಿಡಿಯೊ ನೋಡಿದ ಶಿಕ್ಷಣ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.