ನವದೆಹಲಿ: ನಾಲ್ಕು ರಾಜ್ಯಗಳಲ್ಲಿ ಹಕ್ಕಿಜ್ವರ ವರದಿಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೇಶೀಯ ಪಕ್ಷಿಗಳು ಮತ್ತು ಕೋಳಿಗಳಲ್ಲಿ ಯಾವುದೇ ಅಸಹಜ ಸಾವುಗಳು ವರದಿಯಾದರೆ ಈ ಬಗ್ಗೆ ಜಾಗರೂಕರಾಗಿರಬೇಕು ಮತ್ತು ತಕ್ಷಣವೇ ಮಾಹಿತಿ ಯನ್ನು ಪಶುಸಂಗೋಪನಾ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಎಂದು ಕೇಂದ್ರವು ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಮತ್ತು ಪ್ರಾಣಿ ಮತ್ತು ಹೈನುಗಾರಿಕೆ ಇಲಾಖೆ ಮೇ 25 ರಂದು ಹೊರಡಿಸಿದ ಜಂಟಿ ಸಲಹೆಯಲ್ಲಿ, 2024 ರಲ್ಲಿ, […]