ನವದೆಹಲಿ: ಲಷ್ಕರ್-ಎ-ತೈಯಬಾ ಮುಖ್ಯಸ್ಥ ಹಫೀಜ್ ಸಯೀದ್ ಅವರ ಪುತ್ರ ಹಫೀಜ್ ತಲ್ಹಾ ಸಯೀದ್ ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, 1967 ರ ಅಡಿಯಲ್ಲಿ ‘ಭಯೋತ್ಪಾದಕ’ ಎಂದು ಘೋಷಿಸಲಾಗಿದೆ. ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, ಪಟ್ಟಿಯಲ್ಲಿ 47 ವರ್ಷದ ತಲ್ಹಾ ಸಯೀದ್ ಹೆಸರು ಸೇರಿದೆ. ತಲ್ಹಾ ಸಯೀದ್ ಎಲ್ಇಟಿಯ ಕ್ಲರಿಕ್ ವಿಭಾಗದ ಮುಖ್ಯಸ್ಥ. ತಲ್ಹಾ ಸಯೀದ್ ‘ಭಾರತ ಮತ್ತು ಅಫ್ಗಾನಿಸ್ತಾನದಲ್ಲಿ ಎಲ್ಇಟಿಗೆ ನೇಮಕಾತಿ, ನಿಧಿ ಸಂಗ್ರಹ, ಯೋಜನೆ ಮತ್ತು ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ’ ಎಂದು ಹೇಳಿದೆ. […]