ಹೈದರಾಬಾದ್: ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ರಾಜಮೌಳಿ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ರಾಜಮೌಳಿ ಕೇವಲ ನಿರ್ದೇಶಕ ಮಾತ್ರವಲ್ಲ. ಅವರು ಉತ್ತಮ ಚಿತ್ರಕಥೆಗಾರ, ಸ್ಟಂಟ್ ನಿರ್ದೇಶಕ ಸಹ ಹೌದು. ಆಕ್ಷನ್ ಪ್ಯಾಕ್ ಸಿನಿಮಾಗಳಿಗೆ ರಾಜಮೌಳಿ ಹೆಸರುವಾಸಿ. ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ದೇಶ ಮಾತ್ರ ವಲ್ಲದೆ ವಿದೇಶದಲ್ಲೂ ಬಾಹುಬಲಿ […]