ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಅಂದರೆ ನಿಶ್ಚಿಂತೆಯಿಂದ, ಉತ್ತಮ ಜೀವನ ಸಾಗಿಸಲು ಆರೋಗ್ಯ ಅತೀ ಮುಖ್ಯ. ಇದೇ ಕಾರಣಕ್ಕೆ ನಮ್ಮ ಹಿರಿಯರು ಆರೋಗ್ಯ ವಿಚಾರದಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಅದರಲ್ಲಿಯೂ ಇಂದಿನ ಈ ಧಾವಂತದ ಬದುಕಿನಲ್ಲಿ, ದಿನೇ ದಿನೆ ಕಲುಷಿತವಾಗುತ್ತಿರುವ ವಾತಾವಣ, ವಿಷವಾಗುತ್ತಿರುವ ಆಹಾರದ ಮಧ್ಯೆ ಆರೋಗ್ಯವನ್ನು ಕಾಪಾಡುವುದು ಸವಾಲಿನ ಸಂಗತಿಯೇ ಹೌದು. ಆಕಸ್ಮಿಕವಾಗಿ ಅನಾರೋಗ್ಯ ಸಂಭವಿಸಿದರೆ ನಮ್ಮೆಲ್ಲ ಉಳಿತಾಯ ಚಿಕಿತ್ಸೆಗಾಗಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ಪರಿಸ್ಥಿತಿ ಎದುರಾಗಬಾರದು ಎನ್ನುವ ಕಾರಣಕ್ಕೆ ಆರ್ಥಿಕ ತಜ್ಞರು […]