ಅಮೆರಿಕ: ವಿಶ್ವದ ಜನಪ್ರಿಯ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ವೆಬ್ ಸರಣಿಯ ಟ್ರೈಲರ್ ಸಹ ಇದೀಗ ಬಿಡುಗಡೆ ಆಗಿದೆ. ‘ಗೇಮ್ ಆಫ್ ಥ್ರೋನ್ಸ್’ 2019 ರಲ್ಲಿ ಕೊನೆಯಾಯಿತು. ಬಳಿಕ ‘ಗೇಮ್ ಆಫ್ ಥ್ರೊನ್ಸ್’ನ ಪ್ರೀಕ್ವೆಲ್ ಬಿಡುಗಡೆ ಆಗುತ್ತದೆಂದು ಘೋಷಿಸಲಾಯ್ತು. ಅಂತೆಯೇ, 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಬಿಡುಗಡೆ ಆಯ್ತು. […]