Monday, 16th September 2024

ಮಾ.15 ರಿಂದ ಸುಪ್ರೀಂನಲ್ಲಿ ಹೈಬ್ರಿಡ್ ಫಿಸಿಕಲ್ ವಿಚಾರಣೆ ಆರಂಭ

ನವದೆಹಲಿ: ಕೋವಿಡ್-19 ಕಾರಣದಿಂದಾಗಿ ವಿಡಿಯೋ ಕಾನ್ಫರೆನ್ಸಿಂಗ್ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಮಾ.15 ರಿಂದ ಎಂದಿನಂತೆ ಹೈಬ್ರಿಡ್ ಫಿಸಿಕಲ್ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಸರ್ವೋಚ್ಛ ನ್ಯಾಯಾಲಯ ಹೈಬ್ರಿಡ್ ಫಿಸಿಕಲ್ ವಿಚಾರಣೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಯನ್ನು ನೀಡಿದೆ. ಕಳೆದ ವರ್ಷ ಮಾರ್ಚ್ ನಿಂದ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿತ್ತು. ಆದರೆ ವಕೀಲರು ಹಾಗೂ ವಕೀಲರ ಸನ್ನದು ಸಂಸ್ಥೆಗಳು ಎಂದಿನಂತೆ ವಿಚಾರಣೆ ಪ್ರಾರಂಭಿಸಲು ಮನವಿ ಮಾಡಿದ್ದವು.

ಮುಂದೆ ಓದಿ