ಹೈದರಾಬಾದ್: ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಕನೆಕ್ಟಿಕಟ್‌ನಲ್ಲಿರುವ ತಮ್ಮ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರಿಬ್ಬರೂ ತೆಲಂಗಾಣ ಹಾಗೂ ಆಂಧ್ರಪ್ರದೇಶ ಮೂಲದವರು. ಮೃತಪಟ್ಟ ವಿದ್ಯಾರ್ಥಿಗಳನ್ನು ತೆಲಂಗಾಣದ ವನಪರ್ತಿಯ ಜಿ.ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಎಂದು ಗುರುತಿಸಲಾಗಿದೆ. ತೆಲಂಗಾಣ ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಅವನ ಸಾವಿಗೆ ಕಾರಣ ಮತ್ತು ಅವನ ರೂಮ್‌ಮೇಟ್‌ನ ಬಗ್ಗೆ ಸುಳಿವು ಇಲ್ಲ. ದಿನೇಶ್ ಕಳೆದ ವಾರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು ಎಂದು ಮಾಹಿತಿ ನೀಡಲಾಗಿದೆ. “ಸಮೀಪದ ಕೊಠಡಿಯಲ್ಲಿ ವಾಸಿಸುವ ದಿನೇಶ್ […]