ಭಾರತೀಯ ಮೀನುಗಾರಿಕೆ ಕಾಯಿದೆ ಪ್ರಕಾರ ಮೀನುಗಳು ನಿರ್ದಿಷ್ಟ ಗಾತ್ರವನ್ನು ತಲುಪಿದ ಅನಂತರವೇ ಅವುಗಳನ್ನು ಹಿಡಿಯಲು ಅನುಮತಿ ಇದೆ. ಸಾರ್ಡೀನ್ 10 ಸೆಂಟಿ ಮೀಟರ್ ಮತ್ತು ಮ್ಯಾಕೆರೆಲ್ಗೆ 14 ಸೆಂಟಿ ಮೀಟರ್ ಬೆಳೆದ ಬಳಿಕ ಅವುಗಳನ್ನು ಹಿಡಿಯಬಹುದು. ಆದರೆ ಕೇರಳದಲ್ಲಿ ಅಕ್ರಮ ಮೀನುಗಾರಿಕೆಯಿಂದ (Illegal Fishing) 100 ಲೋಡ್ ಮರಿ ಸಾರ್ಡೀನ್ಗಳನ್ನು ಹಿಡಿದು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.