ನವದೆಹಲಿ/ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.40 ರಷ್ಟು ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಮೂಲಕ ಭಾರತದಲ್ಲೂ ಪ್ರತಿ ಲೀಟರ್‌ಗೆ ಡೀಸೆಲ್ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಏರಿಕೆಯಾಗಿರುವುದು ವಿವಿಧ ರೀತಿಯಲ್ಲಿ ಪರಿಣಾಮ ಬೀರಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆಯ ಹೆಚ್ಚಳದಿಂದ ನಯಾರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಖಾಸಗಿ ಚಿಲ್ಲರೆ ವ್ಯಾಪಾರಿಗಳು ಹೆಚ್ಚು ಹಾನಿಗೊಳಗಾಗಿದ್ದಾರೆ. ಆದರೆ ಈಗ ಪಂಪ್‌ಗಳನ್ನು ಮುಚ್ಚುವುದು ಹೆಚ್ಚು ಕಾರ್ಯ ಸಾಧ್ಯವಾದ […]