ಟೆಹ್ರಾನ್: ಪೂರ್ವ ಇರಾನ್‌ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈಗ ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟದಿಂದಾಗಿ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಸ್ಥಳದಿಂದ ದೂರ ಸರಿದಿವೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಿರ್ಜಾಂಡ್ ಆರ್ಥಿಕ ವಿಶೇಷ ವಲಯದಲ್ಲಿರುವ ರಿಫೈನರಿಯ ಎಲ್ಲಾ 18 ಘಟಕಗಳಿಗೆ ಬೆಂಕಿ ವ್ಯಾಪಿಸಿದೆ ಮತ್ತು ಅಗ್ನಿಯ ಕೆನ್ನಾಲಿಗೆ ಹೆಚ್ಚಾಗಿದೆ ಎಂದು ಗವರ್ನರ್ ಅಲಿ ಫಜೆಲಿ ಹೇಳಿದ್ದಾರೆ. ಈಗಾಗಲೇ ಮೂರು […]