ಕರಾಚಿ : ಪಾಕಿಸ್ತಾನದಿಂದ ಇರಾಕ್ ಗೆ ಶಿಯಾ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮಧ್ಯ ಇರಾನ್ ನಲ್ಲಿ ಅಪಘಾತಕ್ಕೀಡಾಗಿದ್ದು, ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ. ಮಧ್ಯ ಇರಾನಿನ ಯಾಜ್ದ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ತುರ್ತು ಅಧಿಕಾರಿ ಮೊಹಮ್ಮದ್ ಅಲಿ ತಿಳಿಸಿದ್ದಾರೆ. ಅಪಘಾತದಲ್ಲಿ ಇನ್ನೂ 23 ಜನರು ಗಾಯಗೊಂಡಿದ್ದು, ಅವರಲ್ಲಿ 14 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಎಲ್ಲಾ ಬಸ್ ಪ್ರಯಾಣಿಕರು ಪಾಕಿಸ್ತಾನ ಮೂಲದವರು ಎಂದು ಅವರು ಹೇಳಿದರು. ಇರಾನ್ ರಾಜಧಾನಿ ಟೆಹ್ರಾನ್ನ […]