ಭಾರತದ ಪಕ್ಕದಲ್ಲಿರುವ ಪುಟ್ಟ ದ್ವೀಪರಾಷ್ಟ್ರ ಮಾಲ್ಡೀವ್ಸ್ ಗೆ ಮೊನ್ನೆ ಹೋಗಿದ್ದೆ. ನಾನು ಅಲ್ಲಿಗೆ ಸುಮಾರು 24 ವರ್ಷಗಳ ಹಿಂದೆ ಹೋಗಿದ್ದೆ. ಸಮುದ್ರವೇ ಹೆಚ್ಚಿರುವ, ಸಮುದ್ರವನ್ನೇ ನೆಚ್ಚಿರುವ, ಭೂಭಾಗ ಕಮ್ಮಿಯಿರುವ, ಬರೀ ಐದೂವರೆ ಲಕ್ಷ ಜನಸಂಖ್ಯೆ ಇರುವ ದೇಶ ಮಾಲ್ಡೀವ್ಸ್. ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ಈಗ ರಾಜತಾಂತ್ರಿಕ ಸಂಬಂಧ ಸರಿಯಿಲ್ಲ. ಆದರೂ ಭಾರತೀಯರನ್ನು ಕಂಡರೆ ಇಲ್ಲಿನ ಜನರಿಗೆ ಆದರ, ಗೌರವ ಇದ್ದೇ ಇದೆ. ‘ಅದು ಮೇಲಿನವರ ಸಮಸ್ಯೆ, ನಮಗೆ ಅದು ಸಂಬಂಧಿಸಿದ್ದಲ್ಲ’ ಎಂದು ನಾನು ಉಳಿದುಕೊಂಡ ಹೋಟೆಲ್ […]