ಮಧುರೈ: ತಮಿಳುನಾಡಿನಲ್ಲಿ ಎತ್ತುಗಳನ್ನು ಪಳಗಿಸುವ ಕ್ರೀಡೆಯಾದ ಪ್ರಸಿದ್ಧ ಅವನಿಯಪುರಂ ಜಲ್ಲಿಕಟ್ಟು ಹಬ್ಬದ ಸಂದರ್ಭದಲ್ಲಿ ಮಧುರೈನಲ್ಲಿ ಪ್ರಾರಂಭವಾಯಿತು. ಈ ಕ್ರೀಡೆಯ ಸಂದರ್ಭದಲ್ಲಿ ಹೋರಿ ತಿವಿದು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 36 ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಈ ಕಾರ್ಯಕ್ರಮಕ್ಕೆ 1,000 ಎತ್ತುಗಳು ಮತ್ತು 600 ಪಳಗಿಸುವವರು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮವು ಸೋಮವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಮುಂದಿನ ಮೂರು ದಿನಗಳವರೆಗೆ ನಡೆಯಲಿದೆ. ಅವನಿಯಪುರಂ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಹೋರಿ ತಿವಿದು ಸಬ್ ಇನ್ಸ್ಪೆಕ್ಟರ್ ಸೇರಿದಂತೆ 36 ಜನರು ಗಾಯಗೊಂಡಿದ್ದಾರೆ. 36 […]